Image

ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್

ಕೆಂಗೇರಿ ಸ್ಯಾಟಲೈಟ್ ಟೌನ್, ಬೆಂಗಳೂರು
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಶಾಶ್ವತವಾಗಿ ಸಂಯೋಜಿತವಾಗಿದೆ

ಎನ್ಎಎಸಿ ಮಾನ್ಯತೆ- 'ಬಿ' ಗ್ರೇಡ್

ಕಾರ್ಯಕ್ರಮಗಳ ಅವಲೋಕನ

ನಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ಬಿ.ಕಾಂ., ಬಿ.ಬಿ.ಎ ಮತ್ತು ಬಿ.ಸಿ.ಎ.ಯಲ್ಲಿ ಮೂರು ವರ್ಷಗಳ ಪದವಿಯನ್ನು ನೀಡುತ್ತೇವೆ ಇವುಗಳು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಪದವಿಗಳಾಗಿವೆ.

ವಾಣಿಜ್ಯ ಮತ್ತು ನಿರ್ವಹಣಾ, ಗಣಕ ವಿಭಾಗವು ಸ್ಪರ್ಧಾತ್ಮಕ ಜಗತ್ತಿಗೆ ವೃತ್ತಿಪರನ್ನಾಗಿ ವಿವೇಕಯುತ ವಿದ್ಯಾರ್ಥಿಗಳಾಗಲು ಸಹಕರಿಸುತ್ತದೆ.

ಬಿ.ಕಾಂ. (ವಾಣಿಜ್ಯಶಾಸ್ತ್ರ ಪದವಿ)

ಬಿ.ಕಾಂ. ಪದವಿ ಸ್ಪರ್ಧಾತ್ಮಕ (ಕಾರ್ಪೊರೇಟ್) ಮತ್ತು ಶೈಕ್ಷಣಿಕ ಜಗತ್ತನ್ನು ಜೋಡಿಸುವ ವೈವಿಧ್ಯಮಯ ವಿಷಯಗಳನ್ನು ಹೊಂದಿದೆ. ವಾಣಿಜ್ಯ ಪದವೀಧರರಿಗೆ ವ್ಯವಹಾರ ಜಗತ್ತಿನ ಭಾರಿ ಬೇಡಿಕೆಯನ್ನು ಹೊಂದಿದ್ದು, ಒಂದು ವೇಳೆ ಒಬ್ಬರು ಹೆಚ್ಚಿನ ಅರ್ಹತೆಗಾಗಿ ಇಚ್ಚೆಯನ್ನು ಹೊಂದಿದ್ದರೆ, ಅವರಿಗೆ ವ್ಯವಹಾರ ಜಗತ್ತಿನ ಅನೇಕ ಸ್ನಾತಕ ಪದವಿ ಲಭ್ಯವಿರುತ್ತದೆ.

ಬಿ.ಬಿ.ಎ. (ನಿರ್ವಾಹಕಶಾಸ್ತ್ರ ಪದವಿ)

ಬಿ.ಬಿ.ಎ. ಪದವಿಯು ವ್ಯವಹಾರ ನಿರ್ವಹಣೆಯ ರಚನೆಯನ್ನು ಆಳವಾಗಿ ತಿಳಿಸುತ್ತದೆ. ಪರಿಕಲ್ಪನಾ ಜ್ಞಾನ, ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ಮಾಹಿತಿ ತಂತ್ರಜ್ಞಾನವು ಈ ಪದವಿಯ ಪ್ರಮುಖ ಅವಶ್ಯಕತೆಗಳಾಗಿವೆ. ವಿಚಾರ ಸಂಕಿರಣ, ಗುಂಪು ಚರ್ಚೆಗಳು, ವ್ಯವಹಾರ ರಸಪ್ರಶ್ನೆ, ಉದಾಹರಣಾ ಪರಿಶೀಲನೆ (ಕೇಸ್ ಸ್ಟಡಿ) ವಿಶ್ಲೇಷಣೆಗಳು, ಪಾತ್ರಾಭಿನಯ, ಅತಿಥಿ ಉಪನ್ಯಾಸಗಳು ಮತ್ತು ಸಿಬ್ಬಂದಿ ಕೌಶಲ್ಯ ಕೋರ್ಸ್‌ಗಳು, ಯೋಗ್ಯತಾ ಪರೀಕ್ಷೆಗಳು, ಅತ್ಯುತ್ತಮ ವ್ಯವಸ್ಥಾಪಕರಂತಹ ಸ್ಪರ್ಧೆಗಳು, ಅಣಕು ಸಂದರ್ಶನಗಳು ಇತ್ಯಾದಿ. ಪರೀಕ್ಷೆಯ ಸಮಯದಲ್ಲಿ ಯೋಜನಾ ವರದಿಗಳನ್ನು ಸಲ್ಲಿಸುವ ಆಧಾರದ ಮೇಲೆ ಬಿ.ಬಿ.ಎ. ವಿದ್ಯಾರ್ಥಿಗಳಿಗೆ ಕೈಗಾರಿಕಾ ಪರಿಶೀಲನಾ ಭೇಟಿ ಕಡ್ಡಾಯವಾಗಿದೆ.

ಬಿ.ಸಿ.ಎ (ಗಣಕ ಶಾಸ್ತ್ರ ಪದವಿ)

ಬಿ.ಸಿ.ಎ., ಕಂಪ್ಯೂಟರ್ ಅಪ್ಲಿಕೇಶನ್ ಕ್ಷೇತ್ರದಲ್ಲಿ ಒಂದು ಹೊಸ ಯುಗದ ಪದವಿ ಆಗಿದೆ. ಬಿ.ಸಿ.ಎ. ಯಲ್ಲಿ ಓದಿದ ವಿಷಯಗಳು ಎಂಜಿನಿಯರಿಂಗ್ ವಿಷಯಕ್ಕೆ ಸಮನಾಗಿರುತ್ತದೆ. ಬಿ.ಸಿ.ಎ ಎನ್ನುವುದು ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ವಿಯಾಗಲು ಬಯಸುವ ವಿದ್ಯಾರ್ಥಿಗಳಿಗೆ ಕಸ್ಟಮೈಸ್ ಮಾಡಲಾದ ಪದವಿ ಆಗಿದೆ. ನೀವು ಕಂಪ್ಯೂಟರ್ ಸಂಬಂಧಿತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರೆ, ಬಿ.ಸಿ.ಎ. ನಿಮಗೆ ಪರಿಪೂರ್ಣ ಪದವಿ ಆಗಿದೆ. ನಮಗೆ ತಿಳಿದಿರುವಂತೆ ಭಾರತವು ಐಟಿ ಕಂಪನಿಗಳ ಶಕ್ತಿಯಾಗಿದೆ ಮತ್ತು ಬೆಂಗಳೂರು ಐಟಿ ನಗರವಾಗಿದೆ. ಹೀಗಾಗಿ ಬಿ.ಸಿ.ಎ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕಂಪನಿಗಳು ಉದ್ಯೋಗಗಳನ್ನು ಒದಗಿಸುತ್ತದೆ. ಬಿ.ಸಿ.ಎ. ಹೊಂದಿರುವವರು ಐಟಿ ಕಂಪನಿಗಳಲ್ಲಿ (ಜೂನಿಯರ್ ಪ್ರೋಗ್ರಾಮರ್) ಕಿರಿಯ ಗಣಕಯಂತ್ರ ತಂತ್ರಜ್ಞನಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಬಹುದು, ನಂತರದಲ್ಲಿ ಅವರು ಹಿರಿಯ ಕಾರ್ಯನಿರ್ವಾಹಕರಾಗಿ ಬಡ್ತಿ ಹೊಂದಬಹುದು.